ಒಸ್ಮಾನಿಯಾ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿ (OUDL): ಸಾವಿರಾರು ಕನ್ನಡ ಪಿಡಿಎಫ್ ಪುಸ್ತಕಗಳು ಇಲ್ಲಿವೆ. ಅಂಗಡಿಗಳಲ್ಲಿ ಈಗ ಕೊಳ್ಳಲು ಸಿಗಲಾರದಂತಹ, ಮುದ್ರಣ ನಿಂತುಹೋದಂತಹ ಹಳೆಯ ಒಳ್ಳೊಳ್ಳೆಯ ಕೃತಿಗಳು ಇದರಲ್ಲಿ ಬಹಳಷ್ಟಿವೆ. (ಉಚಿತ)
ಓಪನ್ ಲೈಬ್ರರಿ (Open library): ಕೆಲವು ಹಳೆಯ ಪಿಡಿಎಫ್ ಪುಸ್ತಕಗಳಿವೆ. (ಉಚಿತ)
ಆರ್ಕೈವ್ (Archive): ಹಳೆಯ ಸಾಹಿತ್ಯ, ಪೌರಾಣಿಕ, ಸ್ತೋತ್ರ, ಪೂಜೆ ಮುಂತಾದ ಪುಸ್ತಕಗಳ ಪಿಡಿಎಫ್ ಇವೆ. (ಉಚಿತ)
ಮತ್ತೊಂದಿಷ್ಟು ಪುಸ್ತಕಗಳು- ಇಲ್ಲಿ ಮತ್ತು ಇಲ್ಲಿ: ಕಾರಂತ, ತೇಜಸ್ವಿ, ಭೈರಪ್ಪ, ಕುವೆಂಪು, ಸಾಯಿಸುತೆ, ಯಂಡಮೂರಿ, ಕೌಂಡಿನ್ಯಸೇರಿದಂತೆ ಹಲವು ಹಳೆ, ಹೊಸ ಪುಸ್ತಕಗಳಿವೆ. ಎಲ್ಲವೂ ಪಿಡಿಎಫ್ ರೂಪದಲ್ಲಿವೆ. ಇವು ಬಹುಶಃ ಪೈರೇಟೆಡ್ ಪುಸ್ತಕಗಳಾಗಿವೆ. (ಇವುಗಳ ಕೊಂಡಿಗಳನ್ನು ಮಾತ್ರ ಹಂಚಲಾಗಿದೆ. ಪುಸ್ತಕದ ಪೈರೆಸಿಗೆ ನಾನಾಗಲೀ , ಈ ಕೊಂಡಿಗಳನ್ನು ಹಾಕಿದವರಾಗಲೀ ಜವಾಬ್ದಾರರಲ್ಲ)
ಐ ಫೋನ್ ಮೂಲಕ ಕನ್ನಡ ಪುಸ್ತಕಗಳನ್ನು ಓದಲು ಇಲ್ಲಿದೆ ಸುಮಾರು ಸಾವಿರ ಪುಸ್ತಕಗಳ ಕನ್ನಡ ಲೈಬ್ರರಿ.